ನಮಸ್ಕಾರ ಪ್ರೀತಿಯ ಮಿತ್ರರೇ, ಕರ್ನಾಟಕ ಪೊಲೀಸ್ ಇಲಾಖೆಯು ಮೇ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕಾನ್ಸ್ಟೇಬಲ್ ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಹೊರಡಿಸಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿತ್ತು.
ಅರ್ಜಿಯನ್ನು ಆಹ್ವಾನಿಸಿತು, ಆದರೆ ಈ ಕೋವಿಡ್ 19 ಕಾರಣದಿಂದಾಗಿ ಪರೀಕ್ಷೆ ನಡೆಯುವುದು ಸ್ವಲ್ಪ ವಿಳಂಬವೇ ಆಯಿತು. ಆದರೆ ಇದೀಗ ಕರ್ನಾಟಕ ಪೊಲೀಸ್ ಇಲಾಖೆ ಕಾನ್ಸ್ಟೇಬಲ್ ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ. ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ವಿವಿಧ ಪರೀಕ್ಷೆಗಳ ದಿನಾಂಕಗಳನ್ನು ಕೂಡ ಪ್ರಕಟಿಸಿದೆ. ಆ ಪರೀಕ್ಷೆಯ ದಿನಾಂಕಗಳು ಹೀಗಿವೆ.
2565 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಪರೀಕ್ಷೆ ದಿನಾಂಕ:
20 ಸೆಪ್ಟೆಂಬರ್ 2020
1449 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಪರೀಕ್ಷೆ ದಿನಾಂಕ:
18 ಅಕ್ಟೋಬರ್ 2020
2672 ಕೆಎಸ್ಸಾರ್ಪಿ ಕಾನ್ಸ್ಟೇಬಲ್ ಹುದ್ದೆಗಳಿಗೆ ಪರೀಕ್ಷೆ ದಿನಾಂಕ:
22 ನವೆಂಬರ್ 2020
ಮುಖ್ಯವಾದ ಸೂಚನೆ:
ವಿವಿಧ ಕಾನ್ಸ್ಟೇಬಲ್ ಹುದ್ದೆಗಳಿಗೆ ಪರೀಕ್ಷೆಗಳು ಇನ್ನೇನು ಬರಲಿವೆ. ಸಿವಿಲ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಪರೀಕ್ಷೆ ನಡೆಯಲಿದೆ. ಹಲವಾರು ಮಂದಿ ಇನ್ನೂ ಕೂಡ ಅಭ್ಯಾಸವನ್ನು ಆರಂಭಿಸಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು ನಾವು ನಿಮಗಾಗಿ ಅಂದರೆ ಇನ್ನು ಕೂಡ ಪರೀಕ್ಷೆಗೆ ಅಭ್ಯಾಸವನ್ನು ಶುರು ಮಾಡದೇ ಇರುವಂತಹ ಅಭ್ಯರ್ಥಿಗಳಿಗೆ “ ಕರ್ನಾಟಕ ಜಾಬ್ ಅಲರ್ಟ್ಸ್” ಕಡೆಯಿಂದ ಚಿಕ್ಕದಾಗಿ ಚೊಕ್ಕದಾಗಿ ಕಾನ್ಸ್ಟೇಬಲ್ ಪ್ರಶ್ನೋತ್ತರ ಪತ್ರಿಕೆಗೆ ಅನುಗುಣವಾಗಿ ಒಂದು ಡಿಜಿಟಲ್ ಪುಸ್ತಕವನ್ನು ಜಾರಿಗೆ ತಂದಿದ್ದೇವೆ. ಈಗ ಇರುವ ಕಡಿಮೆ ಸಮಯದಲ್ಲಿ ನೀವು ಕನಿಷ್ಠಪಕ್ಷ ನಾವು ಜಾರಿಗೆ ತಂದಿರುವ ಪುಸ್ತಕವನ್ನು ಓದಿ. ಈ ಪುಸ್ತಕದಲ್ಲಿ ಕಾನ್ಸ್ಟೇಬಲ್ ಪರೀಕ್ಷೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಗಳಿವೆ.
ಹೆದರಬೇಡಿ, ಎದೆಗುಂದಬೇಡಿ, ಧೈರ್ಯ ಕಳೆದುಕೊಳ್ಳಬೇಡಿ. ಇನ್ನು ಸಮಯಾವಕಾಶ ಇದೆ ಈಗಲೂ ನೀವು ಕೂಡ ಹೋರಾಡಬಹುದು. ಇಂದೇ ನಿಮ್ಮ ಅಭ್ಯಾಸವನ್ನು ಪ್ರಾರಂಭಿಸಿ.
ಪುಸ್ತಕವನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ:
POLICE CONSTABLE BOOK - Buy Now(Rs.99 only)
Police Constable Exam Book
Post a Comment
0 Comments