ರಾಜ್ಯದಲ್ಲಿ ಸೇರಿದಂತೆ ಇಡೀ ದೇಶಾದ್ಯಂತ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಅವರ ಆಯುರ್ವೇದ ಔಷಧದ ಮೂಲಕ ಹತ್ತು ಜನ ಪುರಾಣ ವೈರಸ್ ಸೋಂಕಿತರು ಕ್ಲಿನಿಕಲ್ ಟ್ರಯಲ್ ನಲ್ಲಿ ಈಗಾಗಲೇ ಗುಣಮುಖರಾಗಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಅವರು ಕೂಡಾ ಅದನ್ನು ನಿಜ ಎಂದಿದ್ದರು. ಆದರೆ ನಂತರ ಆಯುರ್ವೇದ ಔಷಧಿಗೆ ಮುಂದಿನ ಹಂತದ ಪ್ರಯೋಗಕ್ಕೆ ಯಾವುದೇ ಅವಕಾಶ ಇನ್ನು ದೊರೆತಿಲ್ಲ. ಈಗ ಡಾ.ಗಿರಿಧರ ಕಜೆ ಅವರು ಕೊರೊನಾ ಓಎಲ್ಎಕ್ಸ್ ಸೋಂಕು ನಿವಾರಣೆಗೆ ನಾನು ನೀಡುತ್ತಿರುವ ಮಾತ್ರೆಗಳನ್ನು ಶೀಘ್ರದಲ್ಲೇ ಸರ್ಕಾರ ಹಂಚಲು ಮುಂದಾಗುತ್ತೆ ಎಂದು ನಾನು ನಂಬಿರುವುದಾಗಿ ಹೇಳುತ್ತಾ ಪ್ರಸ್ತುತ ಈ ಮಾತ್ರೆಗಳು ಪ್ರಾಥಮಿಕ ಸಂಪರ್ಕಕ್ಕೆ ಬಂದವರಿಗೆ ಸುಮಾರು 70 ಲಕ್ಷ ಮಾತ್ರೆಗಳ ಅವಶ್ಯಕತೆ ಇದೆ ಎಂದು ಅವರು ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ಸರ್ಕಾರ ಏನಾದರೂ ಸಹಾಯ ಮಾಡದೇ ಇದ್ದಲ್ಲಿ ತಾವೇ ಅಷ್ಟು ಮಾತ್ರೆಗಳನ್ನು ಉಚಿತವಾಗಿ ಕರುನಾ ವೈರಸ್ ಸೋಂಕು ಪೀಡಿತ ಜನರಿಗೆ ತಲುಪಿಸಲು ಸಿದ್ಧರಿರುವುದಾಗಿ ತಿಳಿಸುತ್ತಾ, ಈ ಮಾತ್ರೆಗಳನ್ನು ಸರ್ಕಾರಕ್ಕೆ ನೀಡುತ್ತೇನೆ ಎಂದು ಹೇಳಿದ್ದಾರೆ. ಸರ್ಕಾರದ ಬಳಿ ಪ್ರಾಥಮಿಕ ಸಂಪರ್ಕಿತರ ಕಾಂಟ್ಯಾಕ್ಟ್ಗಳ ಲಿಸ್ಟ್ ಇದ್ದು, ಆ ಲಿಸ್ಟ್ ಅಲ್ಲಿ ಇರುವವರಿಗೆ ಸರ್ಕಾರ ಈ ಮಾತ್ರೆಗಳನ್ನು ನೀಡಬೇಕೆಂದು ಅವರು ತಿಳಿಸಿದ್ದಾರೆ. ಒಂದು ವೇಳೆ ಸರ್ಕಾರ ಏನಾದರೂ ಜನರಿಗೆ ಈ ಮಾತ್ರೆಗಳನ್ನು ನೀಡದಿದ್ದರೆ, ಸ್ವತಃ ತಾನೇ ಎಲ್ಲರಿಗೂ ಉಚಿತವಾಗಿ ಕರುನಾ ವೈರಸ್ ಸೋಂಕು ಇರುವ ರೋಗಿಗಳಿಗೆ ಹಂಚುವುದಾಗಿ ತಿಳಿಸಿದ್ದಾರೆ.
ಈ ಮಾತ್ರೆಗಳನ್ನು ಸರ್ಕಾರ ಇಮ್ಯುನ್ ಬೂಸ್ಟರ್ ಎಂದು ಜನರಿಗೆ ನೀಡಲಿ ಎಂದು ಹೇಳುತ್ತಾ ಈ ಇಮ್ಯುನ್ ಬೂಸ್ಟರ್ ಮಾತ್ರೆಗಳಿಂದಾಗಿ ಕುರುಣಾ ವೈರಸ್ ಸೋಂಕಿತರು 2 ದಿನ ಮುಂಚಿತವಾಗಿ ಆಸ್ಪತ್ರೆಗಳಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದರೆ ಅದರಿಂದ ಸರ್ಕಾರಕ್ಕೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ ಖರ್ಚು ಕೂಡಾ ಉಳಿತಾಯ ವಾಗುವುದಿಲ್ಲ ವೇ ? ಎಂದು ಅವರು ಪ್ರಶ್ನೆಯನ್ನು ಮಾಡಿದ್ದಾರೆ. ಈ ಕುರಿತು ಯೋಚನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಕೂಡಾ ಅವರು ಹೇಳಿದ್ದಾರೆ. ಇನ್ನೊಂದು ಅಥವಾ ಎರಡು ವಾರಗಳಲ್ಲಿ ಈ ಮಾತ್ರೆಗಳನ್ನು ಮಾರುಕಟ್ಟೆಗೆ ಬಿಡಲಾಗುವುದು ಎಂದಿರುವ ಅವರು ಇದನ್ನು ಓಪನ್ ಫಾರ್ಮುಲಾ ಮಾಡಿದರೆ ಉತ್ತಮ ಎಂದಿದ್ದಾರೆ.
Post a Comment
0 Comments